ನಾನು ವೃತ್ತಿಯಲ್ಲಿ ಅದ್ಯಾಪಕಿಯಾಗಿ ಪ್ರತಿಷ್ಟಿತ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತಿದ್ದೀನಿ. ನಮ್ಮ ದಿನಚರಿ ಹೇಗೆ ಅಂದ್ರೆ ಬೆಳಗ್ಗೆ 8.00 ಗಂಟೆಗೆ ಮನೆ ಬಿಟ್ಟರೆ ಸಂಜೆ ಮನೆ ಸೇರೋದು 6.00 ಗಂಟೆ. ಈ ಮಹಾನಗರಿಯ ಜಂಜಾಟ ದಲ್ಲಿ ಜೀವನ ಸಾಗ್ತಾಯಿತ್ತು. ಮಾರ್ಚ್ ಮೊದಲ ವಾರದ ವರೆಗು no problem at all. ಹೀಗೆ ಹಬ್ಬಿಕೊಂಡು ಬಂತು ನೋಡಿ ಮಹಮಾರಿ #ಕೊರೊನ ಅದು ಇದು ಊಹ ಪೊಹಗಳ ನಡುವೆ 2ನೇ ವಾರವು ಮುಗಿಯಿತು.ಮಾರಿಯ ವ್ಯಾಪ್ತಿ ಅತಿಯಾಗುತ್ತಿದ್ದಂತೆ ಸರ್ಕಾರವು ಮುಂಜಾಗೃತಾಕ್ರಮವಾಗಿ ಭಾರತವನ್ನು #lockdown ಮಾಡಿತು. ಈ ಶತಮಾನದ ಮೊದಲ ಅನ್ನೋದಕ್ಕಿಂತ ಎಂದೂ ಕೇಳರಿಯದ #ಗೃಹಬಂಧನ. ಮನೆ ಮನೆ ಗಳಲ್ಲಿ ನಗರಗಳಲ್ಲಿ ಪ್ರಪಂಚದಾದ್ಯಂತ ಶುಚಿತ್ವದ ಅರಿವು ಶುರುವಾಯಿತು. # social distancing ಮಹತ್ವ ಅರಿವಾಯಿತು. #facebook #WhatsApp #twitter #instagram ಗಳಲ್ಲಿ ಓಡಾಡಿದವು #corona ದ ರುದ್ರನರ್ತನ. ದೇಶ ದೇಶಗಳಲ್ಲಿ ಜನರ ನರಳಾಟ ಮನುಷ್ಯನ ಜೀವದ ಬೆಲೆ ಇಷ್ಟೇ ನ ಅನ್ನುವ ಮಟ್ಟಕ್ಕೆ ಹೆದರಿಸಿತು. #t v ಪರದೆ ಗಳ ಮೇಲೆ ಸಾವಿನ ಅಂಕಿ ಅಂಶಗಳು ಜನರನ್ನು #panic ಮಾಡಿದವು. ಬೇರೆ ದೇಶಗಳಲ್ಲಿ ವ್ಯಾಪಿಸಿದ ರೋಗದ ಲಕ್ಷಣ ವನ್ನು ಗಮನಿಸಿ ಸರ್ಕಾರವು ತೆಗೆದುಕೊಂಡ ನಿರ್ಧಾರವು ಜನರನ್ನು ಉಸಿರಾಡುವಂತೆ ಮಾಡಿತು,ನಂಬಿಕೆ ಹುಟ್ಟಿತು. # stay home #stay safe ಯೆಲ್ಲೆಡೆ ರಾರಾಜಿಸಿತು. ಎಲ್ಲವನ್ನು ಒಂದು ಹಂತಕ್ಕೆ ತರಲು ಹೆಣಗಾಡಿದವರು ಯಾರೆಲ್ಲಾ.....#doctors #nurses #policestaff #ngos #ಪೌರಕಾರ್ಮಿಕರು #paramilitary ಸರ್ವಿಸಸ್ ಜೊತೆಗೆ ಈ ಹಂತದಲ್ಲಿ ರಾಜಕೀಯ ತೋರದ ಸರ್ಕಾರದ ಸೇವಕರು ಇನ್ನು ಅನೇಕ ಮಂದಿ.....ಈ ಯೆಲ್ಲರಿಗೆ ಚಪ್ಪಾಳೆಯ ಮಹಾಪೂರವೇ ಹರಿದು ಬಂತು ಒಂದು ಭಾನುವಾರದ ಸಂಜೆ ನಮ್ಮ ನಮೋ ನೇತೃತ್ವದಲ್ಲಿ. ಹಣತೆ ಬೆಳಗಿ ಹೊಸ ಭರವಸೆಯ ಕಣ್ಣುಗಳನ್ನು ತೆರೆದೆವು ಯೆಲ್ಲದಕ್ಕು ಸಹಕರಿಸಿದೆವು. ಚಿಕ್ಕ ಪುಟ್ಟ ದೊಡ್ಡ ದೊಡ್ಡ ತಪ್ಪುಗಳು ಜೊತೆಯಲ್ಲಿ ನಡೆದವು. ಮಾರ್ಚ್ 16ರಿಂದ ಮೇ 1ರ ತನಕ ಬಂದು ನಿಂತಿದ್ದೇವೆ. ಬರೋಬ್ಬರಿ ಒಂದು ವರೆ ತಿಂಗಳ ಗೃಹಬಂಧನ ಮನೆ ಕೆಲಸದವರಿಲ್ಲದೆ ಮನೆಯವರೆ ಕೆಲಸಕ್ಕೆ ಕೈಜೋಡಿಸಿದರು. ಮನೆಯಲ್ಲಿ ಮನೆಯವರ ಜೊತೆ ಬದುಕಲು ಕಲಿತೆವು. ಮಕ್ಕಳ ಜೊತೆ ಮಕ್ಕಳಾಗಿ ನಲಿದೆವು. ಕುಟುoಬದ ಮಹತ್ವ ಅರಿತೆವು. ಇದರ ಜೊತೆ ನಮ್ಮ professional ಕೆಲಸಗಳು ಒಂದರ ಯಿಂದೆ ಒಂದು ಆರಂಭವಾದವು. ಮನೆಯಲ್ಲಿ ಕೂತು workfrom home ಶುರುವಾಯಿತು.ಇಷ್ಟು ದಿನ ಬರಿ IT ಕ್ಷೇತ್ರದವರು work from home option ಇದ್ದವರು ಯೆಲ್ಲಾ ಕಾರ್ಯಕ್ಷೇತ್ರದವರು ಯೆಲ್ಲರು ಮಾಡಲು ಶುರು ಹಚ್ಚಿದರು.
ಇನ್ನು ನನ್ನ ಅನುಭವಕ್ಕೆ ಬರೋಣ ಮೊದಲ ವಾರ ಬಿಟ್ಟು ಯೆರಡನೇ ವಾರದ lockdown ಅಲ್ಲಿ ನಮಗೂ ಶುರುವಾದವು software tools ಗಳ ಹುಡುಕಾಟ. ಹೇಗೆ ಹುಡುಗರನ್ನು ಪಾಠ ಪ್ರವಚನ ಗಳಲ್ಲಿ ತೊಡಗಿಸುವುದೆಂದು. ಯೆಲ್ಲ ಹುಡುಕಾಟದ ನಡುವೆ ಬಂದಿತೊಂದು ಸುದ್ದಿ zoom ಅನ್ನುವ ಸಹಾಯಕ. students ಗಳನ್ನು reach ಆಗುವ ಪರಿ. ನಮ್ಮ collar ಗಳು ಮೇಲೆದ್ದ ವು IT ಯವರ ಎದುರು. ಮೊದ ಮೊದಲು ಹೆಗಪ್ಪ ಇದರಲ್ಲಿ ಹುಡುಗರಿಗೆ ಪಾಠ ಹೇಳೋದು ಅನ್ನುವ ಯೋಚನೆ. #classroom ಗಳಲ್ಲಿ ಮುಂದೆಯೇ ನಿಂತಿರುವ #lecturer ಮುಂದೆನೆ ಮಾಡುವ ತರಲೆಗಳು ಇನ್ನು ಯೆಲ್ಲೊ ಕೂತು ಪಾಠ ಕೇಳುವ ಪರಿ ಅನ್ನುವ ಚಿಂತೆ. ಪಾಠ ಗಳು ಶುರು ಆಯಿತು ಹುಡುಗರು ಆನ್ಲೈನ್ ಅಲ್ಲಿ ಒಂದೆರಡು ದಿವಸ ಆಟಗಳನ್ನು ಆಡಿದರು. ಆದರು ಯೆನೇ ಹೇಳಿ#classrooms are awesome ಸ್ಟೂಡೆಂಟ್ಸ್ ಮುಂದೆ dias ಮೇಲೇ ನಿಂತು ಇಡೀ class ನೊಡೋದೇ ಒಂದು ಖುಶಿ. ಇನ್ನು ಮನೆ ಕಡೆ ವಿಷಯ ತಗೊಂಡ್ರೇ ಮಕ್ಕಳು ದಿನಕ್ಕೊಂದು snacks item ಗಳ ಬೇಡಿಕೆ ಕೊನೆಗೂ ಅಮ್ಮಂದಿರ ಪ್ರಯೋಗಗಳು ಯೆನೆಲ್ಲಾ variety ಬಜ್ಜಿ ಬೊಂಡಾ, ಪಾನಿಪುರಿ,ಮಸಾಲಪುರಿ,ಚುರ್ ಮುರಿ, manchuri ಗಳು, cake, icecream ಯಪ್ಪ ಅಮ್ಮಂದಿರ ಇಲ್ಲ star hotel chef ಗಳ ಅನ್ನುವಷ್ಟರ ಮಟ್ಟಿಗೆ ಬದ್ಲಾಯಿತು kitchen ಗಳು. ಈ ಜಂಜಾಟ ಗಳ ಪರದಾಟ ಗಳ ನಡುವೆ ಮರೆತಿದ್ದ ಹವ್ಯಾಸಗಳು ಹೊರಬಂದವು.time ಇಲ್ಲ ಯೆನ್ನುತಿದ ಮನಸ್ಸುಗಳು ಯವುದೆಲ್ಲ ಮಾಡಲಿ ಎಂದು ಹಾತೊರೆದವು. ಗೊತ್ತು ಗುರಿಯಿಲ್ಲದೆ ಸಾಗುತಿದ್ದ ಜೀವನಕ್ಕೆ ಲಗಾಮು ಹಾಕುವಂತೆ lockdown period ಬೇಕಿತ್ತು. ಮದ್ಯೆ ಮದ್ಯೆ meeting ಗಳು friends chatting ಗಳು whatsapp status ಗಳು facebook insta ಗಳ post ಗಳು ಸಾಗಿತು lockdown 1.0 , 2.0 ಮತ್ತು ಕಾಲಿಟ್ಟಿರುವ 3.0. ಗೊತ್ತಿಲ್ಲ ಇದು ಎಷ್ಟು ದಿನ ವಾರ ತಿಂಗಳು ವರ್ಷ ಮುಂದುವರೆಯುವುದೆಂದು ಇದೆಲ್ಲದರಿಂದ ನಾವೆಲ್ಲ ಕಲಿಯಬೇಕಿರುವುದು ತುಂಬ. ಬೇಕಿಲ್ಲದ ಬೇಡವಾದುದನ್ನು ಮಾಡಿ ಪ್ರಕೃತಿಯ ವಿಕೋಪವನ್ನು ಎದುರಿಸುತ್ತಿದೀವಿ. ಇನ್ನಾದರೂ ಜೀವನದ ಮೌಲ್ಯಗಳ ಕಡೆ ದೃಷ್ಟಿ ಹರಿಸೋಣ. ನಮ್ಮತನವನ್ನು ತಿದ್ದಿಕೊಂಡು ಎಲ್ಲರೊಂದಿಗೆ ಜೀವಿಸೋಣ. ನಮ್ಮ ಮತ್ತು ಸುತ್ತಮುತ್ತಲಿನ ಜೀವಿಗಳ ಬದುಕನ್ನು ಸುಂದರ ಮಾಡಲು ಪ್ರಯತ್ನಿಸೋಣ. work pressure, stress ,time ಇಲ್ಲ ಎಂದು ಒಡುತ್ತಿರುವ ನಮ್ಮ ಪಯಣವನ್ನು ಪ್ರೀತಿ ,ಮಮತೆ ನೆನಪುಗಳ ಜೊತೆ ಬದುಕಲು ಕಲಿಯೋಣ. ಇಷ್ಟಲ್ಲದೆ ಹೇಳುತ್ತಾರೆಯೆ ಓದಿನಿಂದ ಕಲಿತ ಪಾಠ ಮರೆತರು ಮರೆಯಬಹುದು ಆದರೆ ಜೀವನದಲ್ಲಿ ಅನುಭವದಿಂದ ಕಲಿತ ಪಾಠಗಳು ಮರೆಯಲು ಸಾಧ್ಯವಿಲ್ಲ ಎಂದು.