Monday, June 22, 2020

ಹೀಗೊಂದು ಹಿನ್ನೋಟ

"ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕೂ ಸವೆಯದ ನೆನಪು" ಈ ಹಾಡನ್ನು ಕೇಳಿದಾಗಲೆಲ್ಲ ಒಮ್ಮೆ ಬಾಲ್ಯವನ್ನು ಸುತ್ತಿ ಬರುವ ನೆನಪುಗಳು. ನಮ್ಮ ಬಾಲ್ಯವನ್ನು ಹಿಂತಿರುಗಿ ನೋಡಿದಾಗ ಅದು ಎಷ್ಟು ಸುಂದರ ಮತ್ತು ಅಚ್ಚಳಿಯದೆ ಉಳಿಯುವ ಸುಂದರ ನೆನಪು.
ಮೊದಲ ಹತ್ತು ವರ್ಷ ಯೆಲ್ಲವು ಬಣ್ಣಬಣ್ಣದ್ದು ಮತ್ತು ಅತ್ಯಾಕರ್ಷಕ. ಅದರ ನಂತರವೂ ಅಷ್ಟೇ ಚಿತ್ತಾಕರ್ಷಕ. ಆಟ ಆಡಿದ್ದು, ಕಥೆ ಕೇಳಿದ್ದು, ಬೇಸಿಗೆ ರಜೆಯ ಮೋಜು, ಸುತ್ತ ಮುತ್ತಲಿನವರ ಒಡನಾಟ ಹಾಗು ಸ್ವಲ್ಪವೇ ಸ್ವಲ್ಪ ಪಾಠ. ನಮ್ಮ ಪೀಳಿಗೆಯಂತು ಯಾವುದೇ ಬಲವಂತಕ್ಕೆ ಅಥವಾ ಈಗಿನ ಪೀಳಿಗೆಯ ಹಾಗೆ ಒತ್ತಡದ ಬದುಕನ್ನು ಕಂಡೇ ಇಲ್ಲ. ಶಾಲೆಯಲ್ಲು ಸಹ ವಾರದಲ್ಲಿ ಸೋಮವಾರದ ಉತ್ಸಾಹ, ಬುಧವಾರದ ಆಟದ ಸಮಯ, ಶನಿವಾರದ ಬಿಳಿ ಸಮವಸ್ತ್ರದ ವ್ಯಾಯಾಮಗಳೂ  ಮತ್ತು ಕಾಯುವಿಕೆಯ ಭಾನುವಾರ ಎಲ್ಲವೂ ಅದ್ಭುತ ನೆನೆದಾಗ. ಇಂದಿಗೂ ಸಮವಯಸ್ಕರು ಕೂತು ಚರ್ಚಿಸಿದಾಗ ಮಿನುಗುವ ಕಣ್ಣುಗಳು, ಉತ್ಸಾಹದ ನೆನಪುಗಳು ಆಹಾ! ಹೇಳಲಾಗದು ಸವಿದವರಿಗೆ ಗೊತ್ತು ಅದರ ಗಮ್ಮತ್ತು. ಹೀಗೆ ಬರೋಬ್ಬರಿ ಎರಡು ತಿಂಗಳು ಸಮಯ ಓಡುವ ಕುದುರೆಗೆ ಬ್ರೇಕ್. ಎಲ್ಲವನ್ನೂ ಒಮ್ಮೆ ಮೆಲುಕು ಹಾಕಲು ಸಿಕ್ಕ ಸುವರ್ಣ ಸಮಯವೇ ಸರಿ. ( ಆದರು ವೈರಾಣುವಿನ ಅಟ್ಟಹಾಸವನ್ನು ಮರೆಯಲು ಅಸಾಧ್ಯ). ಗೂಗಲ್ ಗುರುವಿಲ್ಲದೆ, ಜಂಗಮವಾಣಿ ಯ ಸ್ಪರ್ಶ ವಿಲ್ಲದೇ, ಅಂತರಜಾಲದ ಸಂಪರ್ಕ ವಿಲ್ಲದೇ ಬದುಕಿದ ಸಮಯವನ್ನು ನಮ್ಮ ಯುವ ಪೀಳಿಗೆಯ ಮುಂದೆ ತೆರೆದಿಟ್ಟಾಗ ಅನ್ಯ ಗ್ರಹದ ಜೀವಿಗಳ ತರ ಕಾಣುತ್ತೇವೆ. ಹೀಗೆ ಎಲ್ಲದರ ನೆನಪು ಹಾದು ಹೋದಾಗ ಇಂದಿನ ತಂದೆ ತಾಯಿಯರು ತಮ್ಮ ಮಕ್ಕಳ ಹವ್ಯಾಸಗಳನ್ನು ಬೆಳೆಸಲು ಮತ್ತು ಗುರುತಿಸಲು ಎಷ್ಟೆಲ್ಲಾ ಕಷ್ಟ ಪಡುತ್ತಾರೆ.(ಈಗಿನ ಮಕ್ಕಳ ಹವ್ಯಾಸವು ಕ್ಷಣ ಕೊಮ್ಮೆ boring ಆಗಿ ಬಿಡುತ್ತವೇ). ನಾವೆಲ್ಲ ಹವ್ಯಾಸ ಎಂದರೆ ಏನು?  ಏಕೆ ಬೇಕು? ಅಂತ ತಿಳಿಯುವ ಮುನ್ನವೇ ಹವ್ಯಾಸಗಲೊಂದಿಗೆ ಬಂಧಿ ಯಾಗಿದ್ದೆವೇ. ಒಂದ ಎರಡ ನಂಮ ಹವ್ಯಾಸಗಳು ಚಿತ್ರಕಲೆ, ರಂಗೋಲಿ, ಹಾಡು, ಕುಣಿತ, ನಟನೆ, ಕಥೆ, ಕವನ, ಭಾಷಣ, ವೇಷ ಭೂಷಣ ಗಳ ಹಾಕುವುದು and so on ...............
ಇದು ಯಾವುದನ್ನು ಶಿಬಿರಗಳಿಗೆ ಹೋಗಿ ರೂಡಿಸಿಕೊಂಡಿ ದ್ದಲ್ಲ. ಹಾಗೆಯೇ ನೋಡಿ ಕಲಿತದ್ದು.
ಈ ನೆನಪಿನ ಅಂಗಳ ಕ್ಕೆ ಇಳಿದಾಗ ನನ್ನ ಹವ್ಯಾಸಗಳ ಪಟ್ಟಿಯಲ್ಲಿ ಚಿತ್ರ ಕಲೆ ಮೊದಲ ಆಧ್ಯತೆ ಪಡೆದಿತ್ತು. ಚಿತ್ರ ನೋಡಿದ ಕೂಡಲೆ ಅದನ್ನು ನಾನು ಬರೆದರೆ ಹೇಗಿರುತ್ತೆ ಅಂತ ಒಂದು ಕುತೂಹಲ. ಸುಮಾರಾಗಿ ಬಿಡಿಸಿದಾಗ ಇನ್ನು ಚೆನ್ನಾಗಿ ಬಿಡಿಸಬಹುದು ಎಂಬ ಆಲೋಚನೆ. ಚೆನ್ನಾಗಿ ಬಿಡಿಸಿದಾಗ ಇಲ್ಲದ collar ಮೇಲೆತ್ತಿದ ಖುಷಿ. ನನ್ನ ಒಂದು ಅಭ್ಯಾಸ ಹೇಗೆ ಎಂದರೆ ಓದುತ್ತಿದ್ದ ಪುಸ್ತಕದಲ್ಲೆಲ್ಲ ಚಿತ್ತಾರಗಳು. ಇಂದಿಗೂ ಹತ್ತನೇ, ಪಿಯುಸಿ ಮತ್ತು B E ಪುಸ್ತಕದ ಮೇಲೆಲ್ಲಾ ಬಿಡಿಸಿದ ಚಿತ್ತಾರಗಳನ್ನು ನೋಡಿದಾಗ ಕಣ್ಣ ಮುಂದೆ ಸುಳಿದು ಹೋಗುವ ಸಂಧರ್ಭಗಳು. ಬಿಡಿಸಿದ ಚಿತ್ತಾರಕ್ಕೆ ಎರಡೆರಡು ಸಾಲುಗಳ ಬರೆವಣಿಗೆ.
ಜೀವನ ಮುಂದೆ ಸಾಗಿದ ಹಾಗೆ, ಸಮಯದ ಕೊರತೆ,ಹೀಗೆ ಕಾರಣ ಗಳಿಲ್ಲದೆ ಚಿತ್ರ ಬಿಡಿಸುವ ಕೈ ಕಟ್ಟಿತ್ತು. ಆದರೂ ಚಿತ್ರಗಳನ್ನು ನೋಡಿದಾಗ ಅರಳುತ್ತಿದ್ಡ ಕಣ್ಣುಗಳು ಬರೆಯುವ ಆಸೆಯನ್ನು ಕೆಣಕುತ್ತಿದ್ದವು.
ಇತ್ತೀಚೆಗೆ ಬರೆಯುವ ಮತ್ತು ಚಿತ್ರ ಬಿಡಿಸಲು ಕೈಗಳು ಮುಂದಾದವು. ಒಂದೊಂದು ಚಿತ್ರ ಬರೆದು ಮುಗಿಸಿದ ಮೇಲೆ ಕಳೆದ ಬಾಲ್ಯವನ್ನು ಹೊತ್ತು ತಂದಿತು. ಬರೆದ ಚಿತ್ರವನ್ನು ಮಕ್ಕಳಿಗೆ, ಸ್ನೇಹಿತರಿಗೆ ತೋರಿಸಿ ಖುಷಿ ಪಟ್ಟಿದ್ದೀನೀ.
ಹೌದು ಕಾರಣಾಂತರಗಳಿಂದ ನಾವು ಖುಷಿ ಪಡುವ ಮತ್ತು ಪ್ರೀತಿಯಿಂದ ಮಾಡುತ್ತಿದ್ದ ಕೆಲಸಗಳನ್ನು ಬದಿಗೊತ್ತಿರುತ್ತೆವೆ. ಮತ್ತೆ ಅದಕ್ಕೆ ಜೀವ ನೀಡಿದಾಗ ಸಿಗುವ ಖುಷಿ ಬಣ್ಣಿಸಲು ಅಸಾಧ್ಯ.
ಈ ಚಿಕ್ಕ ಚಿಕ್ಕ ನೆನಪುಗಳು ಜೀವನ ಪರ್ಯಂತ ನಮ್ಮೊಡನೆ ಬರುವುದು. ನೆನಪುಗಳು ಎಂದಿಗೂ ಮಾಸದು.

ಮುಗ್ಧ ಪ್ರೀತಿ

Durga mandala

ಪಟಚಿತ್ರ

ಬುಧ್ಧ ಮಂಡಲ

ಮಂಡಲ 



Friday, May 29, 2020

#LockDown ಅನುಭವ


ನಾನು ವೃತ್ತಿಯಲ್ಲಿ ಅದ್ಯಾಪಕಿಯಾಗಿ ಪ್ರತಿಷ್ಟಿತ ಕಾಲೇಜಿನಲ್ಲಿ ಕೆಲಸ ನಿರ್ವಹಿಸುತಿದ್ದೀನಿ. ನಮ್ಮ ದಿನಚರಿ ಹೇಗೆ ಅಂದ್ರೆ ಬೆಳಗ್ಗೆ 8.00 ಗಂಟೆಗೆ ಮನೆ ಬಿಟ್ಟರೆ ಸಂಜೆ ಮನೆ ಸೇರೋದು  6.00 ಗಂಟೆ. ಈ ಮಹಾನಗರಿಯ ಜಂಜಾಟ ದಲ್ಲಿ ಜೀವನ ಸಾಗ್ತಾಯಿತ್ತು. ಮಾರ್ಚ್ ಮೊದಲ ವಾರದ ವರೆಗು no problem at all. ಹೀಗೆ ಹಬ್ಬಿಕೊಂಡು ಬಂತು ನೋಡಿ ಮಹಮಾರಿ #ಕೊರೊನ ಅದು ಇದು ಊಹ ಪೊಹಗಳ ನಡುವೆ 2ನೇ ವಾರವು ಮುಗಿಯಿತು.ಮಾರಿಯ ವ್ಯಾಪ್ತಿ ಅತಿಯಾಗುತ್ತಿದ್ದಂತೆ ಸರ್ಕಾರವು ಮುಂಜಾಗೃತಾಕ್ರಮವಾಗಿ ಭಾರತವನ್ನು #lockdown  ಮಾಡಿತು. ಈ ಶತಮಾನದ ಮೊದಲ ಅನ್ನೋದಕ್ಕಿಂತ ಎಂದೂ ಕೇಳರಿಯದ #ಗೃಹಬಂಧನ. ಮನೆ ಮನೆ ಗಳಲ್ಲಿ ನಗರಗಳಲ್ಲಿ ಪ್ರಪಂಚದಾದ್ಯಂತ ಶುಚಿತ್ವದ ಅರಿವು ಶುರುವಾಯಿತು. # social distancing ಮಹತ್ವ ಅರಿವಾಯಿತು. #facebook #WhatsApp #twitter #instagram   ಗಳಲ್ಲಿ ಓಡಾಡಿದವು #corona ದ ರುದ್ರನರ್ತನ. ದೇಶ ದೇಶಗಳಲ್ಲಿ ಜನರ ನರಳಾಟ ಮನುಷ್ಯನ ಜೀವದ ಬೆಲೆ ಇಷ್ಟೇ ನ ಅನ್ನುವ ಮಟ್ಟಕ್ಕೆ ಹೆದರಿಸಿತು. #t v ಪರದೆ ಗಳ ಮೇಲೆ  ಸಾವಿನ ಅಂಕಿ ಅಂಶಗಳು ಜನರನ್ನು #panic ಮಾಡಿದವು. ಬೇರೆ ದೇಶಗಳಲ್ಲಿ ವ್ಯಾಪಿಸಿದ ರೋಗದ ಲಕ್ಷಣ ವನ್ನು ಗಮನಿಸಿ ಸರ್ಕಾರವು ತೆಗೆದುಕೊಂಡ ನಿರ್ಧಾರವು ಜನರನ್ನು ಉಸಿರಾಡುವಂತೆ ಮಾಡಿತು,ನಂಬಿಕೆ ಹುಟ್ಟಿತು. # stay home #stay safe ಯೆಲ್ಲೆಡೆ ರಾರಾಜಿಸಿತು. ಎಲ್ಲವನ್ನು ಒಂದು ಹಂತಕ್ಕೆ ತರಲು ಹೆಣಗಾಡಿದವರು ಯಾರೆಲ್ಲಾ.....#doctors #nurses #policestaff #ngos #ಪೌರಕಾರ್ಮಿಕರು #paramilitary ಸರ್ವಿಸಸ್ ಜೊತೆಗೆ ಈ ಹಂತದಲ್ಲಿ ರಾಜಕೀಯ ತೋರದ ಸರ್ಕಾರದ ಸೇವಕರು ಇನ್ನು ಅನೇಕ ಮಂದಿ.....ಈ ಯೆಲ್ಲರಿಗೆ ಚಪ್ಪಾಳೆಯ ಮಹಾಪೂರವೇ ಹರಿದು ಬಂತು ಒಂದು ಭಾನುವಾರದ ಸಂಜೆ ನಮ್ಮ ನಮೋ ನೇತೃತ್ವದಲ್ಲಿ. ಹಣತೆ ಬೆಳಗಿ ಹೊಸ  ಭರವಸೆಯ ಕಣ್ಣುಗಳನ್ನು ತೆರೆದೆವು ಯೆಲ್ಲದಕ್ಕು ಸಹಕರಿಸಿದೆವು. ಚಿಕ್ಕ ಪುಟ್ಟ ದೊಡ್ಡ ದೊಡ್ಡ ತಪ್ಪುಗಳು ಜೊತೆಯಲ್ಲಿ ನಡೆದವು. ಮಾರ್ಚ್ 16ರಿಂದ ಮೇ 1ರ ತನಕ ಬಂದು ನಿಂತಿದ್ದೇವೆ. ಬರೋಬ್ಬರಿ ಒಂದು ವರೆ ತಿಂಗಳ ಗೃಹಬಂಧನ ಮನೆ ಕೆಲಸದವರಿಲ್ಲದೆ ಮನೆಯವರೆ ಕೆಲಸಕ್ಕೆ ಕೈಜೋಡಿಸಿದರು. ಮನೆಯಲ್ಲಿ ಮನೆಯವರ ಜೊತೆ ಬದುಕಲು ಕಲಿತೆವು. ಮಕ್ಕಳ ಜೊತೆ ಮಕ್ಕಳಾಗಿ ನಲಿದೆವು. ಕುಟುoಬದ ಮಹತ್ವ ಅರಿತೆವು. ಇದರ ಜೊತೆ ನಮ್ಮ professional ಕೆಲಸಗಳು ಒಂದರ ಯಿಂದೆ ಒಂದು ಆರಂಭವಾದವು. ಮನೆಯಲ್ಲಿ ಕೂತು workfrom home  ಶುರುವಾಯಿತು.ಇಷ್ಟು ದಿನ ಬರಿ IT ಕ್ಷೇತ್ರದವರು work from home option  ಇದ್ದವರು ಯೆಲ್ಲಾ ಕಾರ್ಯಕ್ಷೇತ್ರದವರು ಯೆಲ್ಲರು ಮಾಡಲು ಶುರು ಹಚ್ಚಿದರು.
ಇನ್ನು ನನ್ನ ಅನುಭವಕ್ಕೆ ಬರೋಣ ಮೊದಲ ವಾರ ಬಿಟ್ಟು ಯೆರಡನೇ ವಾರದ lockdown ಅಲ್ಲಿ ನಮಗೂ ಶುರುವಾದವು software tools ಗಳ ಹುಡುಕಾಟ. ಹೇಗೆ ಹುಡುಗರನ್ನು ಪಾಠ ಪ್ರವಚನ ಗಳಲ್ಲಿ ತೊಡಗಿಸುವುದೆಂದು. ಯೆಲ್ಲ ಹುಡುಕಾಟದ ನಡುವೆ ಬಂದಿತೊಂದು ಸುದ್ದಿ zoom ಅನ್ನುವ ಸಹಾಯಕ. students ಗಳನ್ನು reach  ಆಗುವ ಪರಿ. ನಮ್ಮ collar ಗಳು ಮೇಲೆದ್ದ ವು IT ಯವರ ಎದುರು. ಮೊದ ಮೊದಲು ಹೆಗಪ್ಪ ಇದರಲ್ಲಿ ಹುಡುಗರಿಗೆ ಪಾಠ ಹೇಳೋದು ಅನ್ನುವ ಯೋಚನೆ. #classroom ಗಳಲ್ಲಿ ಮುಂದೆಯೇ ನಿಂತಿರುವ #lecturer ಮುಂದೆನೆ ಮಾಡುವ ತರಲೆಗಳು ಇನ್ನು ಯೆಲ್ಲೊ ಕೂತು ಪಾಠ ಕೇಳುವ ಪರಿ ಅನ್ನುವ   ಚಿಂತೆ. ಪಾಠ ಗಳು ಶುರು ಆಯಿತು ಹುಡುಗರು ಆನ್ಲೈನ್ ಅಲ್ಲಿ   ಒಂದೆರಡು ದಿವಸ ಆಟಗಳನ್ನು ಆಡಿದರು. ಆದರು ಯೆನೇ ಹೇಳಿ#classrooms are awesome ಸ್ಟೂಡೆಂಟ್ಸ್ ಮುಂದೆ dias ಮೇಲೇ ನಿಂತು ಇಡೀ class ನೊಡೋದೇ ಒಂದು ಖುಶಿ.  ಇನ್ನು ಮನೆ ಕಡೆ ವಿಷಯ ತಗೊಂಡ್ರೇ ಮಕ್ಕಳು ದಿನಕ್ಕೊಂದು snacks item ಗಳ ಬೇಡಿಕೆ ಕೊನೆಗೂ ಅಮ್ಮಂದಿರ ಪ್ರಯೋಗಗಳು ಯೆನೆಲ್ಲಾ variety ಬಜ್ಜಿ ಬೊಂಡಾ, ಪಾನಿಪುರಿ,ಮಸಾಲಪುರಿ,ಚುರ್ ಮುರಿ, manchuri ಗಳು, cake, icecream ಯಪ್ಪ ಅಮ್ಮಂದಿರ ಇಲ್ಲ star hotel chef ಗಳ ಅನ್ನುವಷ್ಟರ ಮಟ್ಟಿಗೆ ಬದ್ಲಾಯಿತು kitchen ಗಳು. ಈ ಜಂಜಾಟ ಗಳ ಪರದಾಟ ಗಳ ನಡುವೆ ಮರೆತಿದ್ದ ಹವ್ಯಾಸಗಳು ಹೊರಬಂದವು.time ಇಲ್ಲ ಯೆನ್ನುತಿದ ಮನಸ್ಸುಗಳು ಯವುದೆಲ್ಲ ಮಾಡಲಿ ಎಂದು ಹಾತೊರೆದವು. ಗೊತ್ತು ಗುರಿಯಿಲ್ಲದೆ ಸಾಗುತಿದ್ದ ಜೀವನಕ್ಕೆ ಲಗಾಮು ಹಾಕುವಂತೆ lockdown period ಬೇಕಿತ್ತು.  ಮದ್ಯೆ ಮದ್ಯೆ meeting ಗಳು friends chatting ಗಳು whatsapp status ಗಳು facebook insta ಗಳ post ಗಳು ಸಾಗಿತು lockdown 1.0 , 2.0 ಮತ್ತು ಕಾಲಿಟ್ಟಿರುವ 3.0. ಗೊತ್ತಿಲ್ಲ ಇದು ಎಷ್ಟು ದಿನ ವಾರ ತಿಂಗಳು ವರ್ಷ ಮುಂದುವರೆಯುವುದೆಂದು ಇದೆಲ್ಲದರಿಂದ ನಾವೆಲ್ಲ ಕಲಿಯಬೇಕಿರುವುದು ತುಂಬ. ಬೇಕಿಲ್ಲದ ಬೇಡವಾದುದನ್ನು ಮಾಡಿ ಪ್ರಕೃತಿಯ ವಿಕೋಪವನ್ನು ಎದುರಿಸುತ್ತಿದೀವಿ. ಇನ್ನಾದರೂ ಜೀವನದ ಮೌಲ್ಯಗಳ ಕಡೆ ದೃಷ್ಟಿ ಹರಿಸೋಣ. ನಮ್ಮತನವನ್ನು ತಿದ್ದಿಕೊಂಡು ಎಲ್ಲರೊಂದಿಗೆ ಜೀವಿಸೋಣ. ನಮ್ಮ ಮತ್ತು ಸುತ್ತಮುತ್ತಲಿನ ಜೀವಿಗಳ ಬದುಕನ್ನು ಸುಂದರ ಮಾಡಲು ಪ್ರಯತ್ನಿಸೋಣ. work pressure, stress ,time ಇಲ್ಲ ಎಂದು ಒಡುತ್ತಿರುವ ನಮ್ಮ ಪಯಣವನ್ನು ಪ್ರೀತಿ ,ಮಮತೆ ನೆನಪುಗಳ ಜೊತೆ ಬದುಕಲು ಕಲಿಯೋಣ. ಇಷ್ಟಲ್ಲದೆ ಹೇಳುತ್ತಾರೆಯೆ ಓದಿನಿಂದ ಕಲಿತ ಪಾಠ ಮರೆತರು ಮರೆಯಬಹುದು ಆದರೆ ಜೀವನದಲ್ಲಿ ಅನುಭವದಿಂದ ಕಲಿತ ಪಾಠಗಳು ಮರೆಯಲು ಸಾಧ್ಯವಿಲ್ಲ ಎಂದು.

Monday, May 4, 2020

Dream Bigger



Dreams are the cherished aspirations and ambitions. It is an experience of walking the life through a state of mind. Every individual has a dream where they would like to live in. Dreams do act as the projectors which projects our future and necessitates it to become real. They determine the life phases, predicts the future by creating the stairs to reach one's goal. According to the famous words penned as "Think big, dream big, and the result will be big" everyone can dream but those who hunt their dream do find their destiny. Realizing your dreams helps you in finding the destiny which in turn contributes to greater achievements. Struggles and difficulties should never stop you to dream. Their may be ups and downs or hurdles in your way which stop you to dare to dream. So what push yourself harder until your dream turns to a reality. Questions do arise in one's mind how to achieve, when will we succeed, where would we end up and so on.....which would lead to doubt one's capabilities. But never stop pushing yourself, it should become the way of your life.
When one can dream, visualize it with a great mindset and can find the stairs to reach it anything can be accomplished. Many great personalities life examples would shower us handful of inputs of dreaming bigger and making it reality. Dreams of great people do have failed at first but their endless effort to achieve greater things have lead them to success also. It would not always be the easy way to cross, it depends on the perspective of struggle one faces when reaching it. But never run away or fear away that arises within you during the struggle. Hurdles do come in our way which put us down, pull you away from the track, run away from dreaming and so on.... but route the hurdles to strengthen and overpower your hopes and not letting you down.
Failures do happen, its hard to accept which hurts our ego. Take it as part of the journey. Negative things do flow around but it is in our hand to make it positive and move ahead. Don't mind about the number of failures, the count doesn't matter. Hurdles would have stopped you with dreaming and moving up but any day you can start as a new. Do not shutter your hopes, dreams depend on how badly you want to achieve it in reality. Once heard a motivational speaker saying, "Shoot for the moon, even if a person misses, it will land among stars". Do not put restrictions to your dreams which raises you to an extraordinary person.
Set your Goals: Once you can draw the blueprint of your dream set the stages to reach your dream and live to it. Do not compromise with your goals. Set a time frame for living yourself. Monitor the progress whether you are moving closer to your dream. Be clear and specific. Stay motivated till you reach your destination though you have to take some cross roads to reach it.
Appreciate yourself: Though a small accomplishments in reaching your goal pat yourself as it is your milestone to enjoy your journey to reach the destination.
Accept the reality: As dreams do never happen themselves and do not always start at the top go through the practical experiences, dug deeper, identify more and more strategies and focus with a positive attitude


NEVER LIMIT YOURSELF, BELIEVE IN YOURSELF WHICH MAKES ANYTHING POSSIBLE