"ಸವಿ ಸವಿ ನೆನಪು ಸಾವಿರ ನೆನಪು ಸಾವಿರ ಕಾಲಕೂ ಸವೆಯದ ನೆನಪು" ಈ ಹಾಡನ್ನು ಕೇಳಿದಾಗಲೆಲ್ಲ ಒಮ್ಮೆ ಬಾಲ್ಯವನ್ನು ಸುತ್ತಿ ಬರುವ ನೆನಪುಗಳು. ನಮ್ಮ ಬಾಲ್ಯವನ್ನು ಹಿಂತಿರುಗಿ ನೋಡಿದಾಗ ಅದು ಎಷ್ಟು ಸುಂದರ ಮತ್ತು ಅಚ್ಚಳಿಯದೆ ಉಳಿಯುವ ಸುಂದರ ನೆನಪು.
ಮೊದಲ ಹತ್ತು ವರ್ಷ ಯೆಲ್ಲವು ಬಣ್ಣಬಣ್ಣದ್ದು ಮತ್ತು ಅತ್ಯಾಕರ್ಷಕ. ಅದರ ನಂತರವೂ ಅಷ್ಟೇ ಚಿತ್ತಾಕರ್ಷಕ. ಆಟ ಆಡಿದ್ದು, ಕಥೆ ಕೇಳಿದ್ದು, ಬೇಸಿಗೆ ರಜೆಯ ಮೋಜು, ಸುತ್ತ ಮುತ್ತಲಿನವರ ಒಡನಾಟ ಹಾಗು ಸ್ವಲ್ಪವೇ ಸ್ವಲ್ಪ ಪಾಠ. ನಮ್ಮ ಪೀಳಿಗೆಯಂತು ಯಾವುದೇ ಬಲವಂತಕ್ಕೆ ಅಥವಾ ಈಗಿನ ಪೀಳಿಗೆಯ ಹಾಗೆ ಒತ್ತಡದ ಬದುಕನ್ನು ಕಂಡೇ ಇಲ್ಲ. ಶಾಲೆಯಲ್ಲು ಸಹ ವಾರದಲ್ಲಿ ಸೋಮವಾರದ ಉತ್ಸಾಹ, ಬುಧವಾರದ ಆಟದ ಸಮಯ, ಶನಿವಾರದ ಬಿಳಿ ಸಮವಸ್ತ್ರದ ವ್ಯಾಯಾಮಗಳೂ ಮತ್ತು ಕಾಯುವಿಕೆಯ ಭಾನುವಾರ ಎಲ್ಲವೂ ಅದ್ಭುತ ನೆನೆದಾಗ. ಇಂದಿಗೂ ಸಮವಯಸ್ಕರು ಕೂತು ಚರ್ಚಿಸಿದಾಗ ಮಿನುಗುವ ಕಣ್ಣುಗಳು, ಉತ್ಸಾಹದ ನೆನಪುಗಳು ಆಹಾ! ಹೇಳಲಾಗದು ಸವಿದವರಿಗೆ ಗೊತ್ತು ಅದರ ಗಮ್ಮತ್ತು. ಹೀಗೆ ಬರೋಬ್ಬರಿ ಎರಡು ತಿಂಗಳು ಸಮಯ ಓಡುವ ಕುದುರೆಗೆ ಬ್ರೇಕ್. ಎಲ್ಲವನ್ನೂ ಒಮ್ಮೆ ಮೆಲುಕು ಹಾಕಲು ಸಿಕ್ಕ ಸುವರ್ಣ ಸಮಯವೇ ಸರಿ. ( ಆದರು ವೈರಾಣುವಿನ ಅಟ್ಟಹಾಸವನ್ನು ಮರೆಯಲು ಅಸಾಧ್ಯ). ಗೂಗಲ್ ಗುರುವಿಲ್ಲದೆ, ಜಂಗಮವಾಣಿ ಯ ಸ್ಪರ್ಶ ವಿಲ್ಲದೇ, ಅಂತರಜಾಲದ ಸಂಪರ್ಕ ವಿಲ್ಲದೇ ಬದುಕಿದ ಸಮಯವನ್ನು ನಮ್ಮ ಯುವ ಪೀಳಿಗೆಯ ಮುಂದೆ ತೆರೆದಿಟ್ಟಾಗ ಅನ್ಯ ಗ್ರಹದ ಜೀವಿಗಳ ತರ ಕಾಣುತ್ತೇವೆ. ಹೀಗೆ ಎಲ್ಲದರ ನೆನಪು ಹಾದು ಹೋದಾಗ ಇಂದಿನ ತಂದೆ ತಾಯಿಯರು ತಮ್ಮ ಮಕ್ಕಳ ಹವ್ಯಾಸಗಳನ್ನು ಬೆಳೆಸಲು ಮತ್ತು ಗುರುತಿಸಲು ಎಷ್ಟೆಲ್ಲಾ ಕಷ್ಟ ಪಡುತ್ತಾರೆ.(ಈಗಿನ ಮಕ್ಕಳ ಹವ್ಯಾಸವು ಕ್ಷಣ ಕೊಮ್ಮೆ boring ಆಗಿ ಬಿಡುತ್ತವೇ). ನಾವೆಲ್ಲ ಹವ್ಯಾಸ ಎಂದರೆ ಏನು? ಏಕೆ ಬೇಕು? ಅಂತ ತಿಳಿಯುವ ಮುನ್ನವೇ ಹವ್ಯಾಸಗಲೊಂದಿಗೆ ಬಂಧಿ ಯಾಗಿದ್ದೆವೇ. ಒಂದ ಎರಡ ನಂಮ ಹವ್ಯಾಸಗಳು ಚಿತ್ರಕಲೆ, ರಂಗೋಲಿ, ಹಾಡು, ಕುಣಿತ, ನಟನೆ, ಕಥೆ, ಕವನ, ಭಾಷಣ, ವೇಷ ಭೂಷಣ ಗಳ ಹಾಕುವುದು and so on ...............
ಇದು ಯಾವುದನ್ನು ಶಿಬಿರಗಳಿಗೆ ಹೋಗಿ ರೂಡಿಸಿಕೊಂಡಿ ದ್ದಲ್ಲ. ಹಾಗೆಯೇ ನೋಡಿ ಕಲಿತದ್ದು.
ಈ ನೆನಪಿನ ಅಂಗಳ ಕ್ಕೆ ಇಳಿದಾಗ ನನ್ನ ಹವ್ಯಾಸಗಳ ಪಟ್ಟಿಯಲ್ಲಿ ಚಿತ್ರ ಕಲೆ ಮೊದಲ ಆಧ್ಯತೆ ಪಡೆದಿತ್ತು. ಚಿತ್ರ ನೋಡಿದ ಕೂಡಲೆ ಅದನ್ನು ನಾನು ಬರೆದರೆ ಹೇಗಿರುತ್ತೆ ಅಂತ ಒಂದು ಕುತೂಹಲ. ಸುಮಾರಾಗಿ ಬಿಡಿಸಿದಾಗ ಇನ್ನು ಚೆನ್ನಾಗಿ ಬಿಡಿಸಬಹುದು ಎಂಬ ಆಲೋಚನೆ. ಚೆನ್ನಾಗಿ ಬಿಡಿಸಿದಾಗ ಇಲ್ಲದ collar ಮೇಲೆತ್ತಿದ ಖುಷಿ. ನನ್ನ ಒಂದು ಅಭ್ಯಾಸ ಹೇಗೆ ಎಂದರೆ ಓದುತ್ತಿದ್ದ ಪುಸ್ತಕದಲ್ಲೆಲ್ಲ ಚಿತ್ತಾರಗಳು. ಇಂದಿಗೂ ಹತ್ತನೇ, ಪಿಯುಸಿ ಮತ್ತು B E ಪುಸ್ತಕದ ಮೇಲೆಲ್ಲಾ ಬಿಡಿಸಿದ ಚಿತ್ತಾರಗಳನ್ನು ನೋಡಿದಾಗ ಕಣ್ಣ ಮುಂದೆ ಸುಳಿದು ಹೋಗುವ ಸಂಧರ್ಭಗಳು. ಬಿಡಿಸಿದ ಚಿತ್ತಾರಕ್ಕೆ ಎರಡೆರಡು ಸಾಲುಗಳ ಬರೆವಣಿಗೆ.
ಜೀವನ ಮುಂದೆ ಸಾಗಿದ ಹಾಗೆ, ಸಮಯದ ಕೊರತೆ,ಹೀಗೆ ಕಾರಣ ಗಳಿಲ್ಲದೆ ಚಿತ್ರ ಬಿಡಿಸುವ ಕೈ ಕಟ್ಟಿತ್ತು. ಆದರೂ ಚಿತ್ರಗಳನ್ನು ನೋಡಿದಾಗ ಅರಳುತ್ತಿದ್ಡ ಕಣ್ಣುಗಳು ಬರೆಯುವ ಆಸೆಯನ್ನು ಕೆಣಕುತ್ತಿದ್ದವು.
ಇತ್ತೀಚೆಗೆ ಬರೆಯುವ ಮತ್ತು ಚಿತ್ರ ಬಿಡಿಸಲು ಕೈಗಳು ಮುಂದಾದವು. ಒಂದೊಂದು ಚಿತ್ರ ಬರೆದು ಮುಗಿಸಿದ ಮೇಲೆ ಕಳೆದ ಬಾಲ್ಯವನ್ನು ಹೊತ್ತು ತಂದಿತು. ಬರೆದ ಚಿತ್ರವನ್ನು ಮಕ್ಕಳಿಗೆ, ಸ್ನೇಹಿತರಿಗೆ ತೋರಿಸಿ ಖುಷಿ ಪಟ್ಟಿದ್ದೀನೀ.
ಹೌದು ಕಾರಣಾಂತರಗಳಿಂದ ನಾವು ಖುಷಿ ಪಡುವ ಮತ್ತು ಪ್ರೀತಿಯಿಂದ ಮಾಡುತ್ತಿದ್ದ ಕೆಲಸಗಳನ್ನು ಬದಿಗೊತ್ತಿರುತ್ತೆವೆ. ಮತ್ತೆ ಅದಕ್ಕೆ ಜೀವ ನೀಡಿದಾಗ ಸಿಗುವ ಖುಷಿ ಬಣ್ಣಿಸಲು ಅಸಾಧ್ಯ.
ಈ ಚಿಕ್ಕ ಚಿಕ್ಕ ನೆನಪುಗಳು ಜೀವನ ಪರ್ಯಂತ ನಮ್ಮೊಡನೆ ಬರುವುದು. ನೆನಪುಗಳು ಎಂದಿಗೂ ಮಾಸದು.
![]() |
| ಮುಗ್ಧ ಪ್ರೀತಿ |
![]() |
| Durga mandala |
![]() |
| ಪಟಚಿತ್ರ |
![]() |
| ಬುಧ್ಧ ಮಂಡಲ |
![]() |
| ಮಂಡಲ |





Excellent mam
ReplyDeleteGood rewinding of our old memories during this pandamic scenario.
Super sv, lot of patience is required to put manadala
ReplyDeleteVery nice ma'am 👍 ಕನ್ನಡ ನುಡಿ ಮುತ್ತುಗಳನ್ನು ಓದಿ ತುಂಬಾ ಖುಷಿಯಾಯಿತು
ReplyDelete